July 29 : ಸಂತ ಅಂತೋನಿ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ ಅವರ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. ಪ್ರಕೃತಿಯನ್ನು ಸದಾ ಪ್ರೀತಿಸುವ ಗುರುಗಳು ತಮ್ಮ ಹುಟ್ಟುಹಬ್ಬದಂದು ಕೇಕ್ ಬದಲಾಗಿ ಗಿಡಕ್ಕೆ ಸಾಂಕೇತಿಕವಾಗಿ ನೀರುಣಿಸುವ ಮೂಲಕ ಆಚರಿಸಿದರು. ವಿದ್ಯಾರ್ಥಿಗಳು ಹೂಗುಚ್ಛದ ಬದಲಾಗಿ ವಿವಿಧ ಗಿಡಗಳನ್ನು ಪ್ರಾಂಶುಪಾಲರಿಗೆ ಉಡುಗೊರೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವೇಣೂರು ವಲಯದ ಅರಣ್ಯಾಧಿಕಾರಿಗಳಾದ ಶ್ರೀ ಪ್ರಶಾಂತ್ ಕುಮಾರ್ ಪೈಯವರು ಮಾತನಾಡಿ ಪ್ರಕೃತಿಯನ್ನು ಸದಾ ಪ್ರೀತಿಸಿ, ಸ್ವಚ್ಛವಾಗಿಡಿಸಿ ಅದರ ರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಪ್ರಾಂಶುಪಾಲರ ಹುಟ್ಟುಹಬ್ಬ ನಮಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜರವರು ವಹಿಸಿ ಪ್ರಾಂಶುಪಾಲರಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ನಾರಾವಿ ಅರಣ್ಯ ವಲಯಾಧಿಕಾರಿಯಾದ ಶ್ರೀ ಅಜಿತ್ ಕುಮಾರ್, ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾರಾವಿ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿಯಾದ ಶ್ರೀಮತಿ ರೀಟಾ ಪಿಂಟೊ, ನಾರಾವಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅನಿಲ್ ರೋಶನ್, ಉಪ ಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ, ಉಪನ್ಯಾಸಕರಾದ ಶ್ರೀಮತಿ ವಿಲ್ಮಾ ಪಿಂಟೊ, ಕು. ಅಶ್ವಿನಿ ಕ್ರಾಸ್ತಾ ಹಾಗೂ ದಿನೇಶ್ ಬಿ.ಕೆ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.