ಸಪ್ಟೆಂಬರ್ 7, 2022 : ದ. ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ/ಬಾಲಕಿಯರ ತ್ರೋಬಾಲ್ ಪಂದ್ಯಾಟವು ದಕ್ಷಿಣ ಕನ್ನಡ ಸಾಕ್ಷರತಾ ಇಲಾಖೆ, ಮತ್ತು ಸಂತ ಪಾವ್ಲರ ಹಿರಿಯ ಪ್ರಾಥಮಿಕ ಶಾಲೆ ಇವರ ಜಂಟಿ ಆಶ್ರಯದಲ್ಲಿ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿತ್ತು. ಸಮಾರಂಭವನ್ನು ರಾಷ್ಟ್ರೀಯ ತ್ರೋಬಾಲ್ ಆಟಗಾರರಾದ ಶ್ರೀ ಸುಜಿತ್ ಕೆ. ಬಂದಾರು ಅವರು ವಿನೂತನ ರೀತಿಯಲ್ಲಿ ಚೆಂಡನ್ನು ಅಂಗಳದಲ್ಲಿ ಚಲಾಯಿಸುವ ಮುಖಾಂತರ ಉದ್ಘಾಟಿಸಿದರು. ನಾರಾವಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರವೀಂದ್ರ ಪೂಜಾರಿ, ಮುಖ್ಯ ಅತಿಥಿಗಳ ನೆಲೆಯಲ್ಲಿ ನೆರೆದ ಜಿಲ್ಲೆಯ ಎಲ್ಲಾ ತಂಡಗಳಿಗೆ ಶುಭ ಹಾರೈಸಿ, ಸಂತ ಪಾವ್ಲ ಶಾಲೆಯ ಹಳೆ ವಿದ್ಯಾರ್ಥಿಯಾಗಿ ಕಳೆದ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಂಡರು. ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾದರ್ ಸೈಮನ್ ಡಿ’ಸೋಜ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಡಾಯ್ನಾ ರೊಡ್ರಿಗಸ್, ಶ್ರೀಮತಿ ಮಲ್ಲಿಕಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಭುವನೇಶ್ ಜೆ., ಶ್ರೀ ನಿತ್ಯಾನಂದ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಾಣಾಧಿಕಾರುಗಳು, ಮೂಡಬಿದ್ರೆ, ಶ್ರೀ ಸಂತೋಷ್ ಕುಮಾರ್ ನಾರಾವಿ ಮತ್ತು ಅಂಡಿಂಜೆ ಕ್ಲಸ್ಟರ್ ಅಧಿಕಾರಿ, ಪ್ರಾಂಶುಪಾಲರಾದ ವಂದನೀಯ ಫಾದರ್ ಆಲ್ವಿನ್ ಸೆರಾವೊ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ರೀಟಾ ಪಿಂಟೊ, ಶಿಕ್ಷಣ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಗಳ ವತಿಯಿಂದ ರಾಷ್ಟ್ರೀಯ ತ್ರೋಬಾಲ್ ಆಟಗಾರರಾದ ಶ್ರೀ ಸುಜಿತ್ ಕೆ., ಬಂದಾರು ಅವರನ್ನು ಸನ್ಮಾನಿಸಲಾಯಿತು. ಸಂತ ಪಾವ್ಲರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೋಫಿಯಾ ಫೆರ್ನಾಂಡಿಸ್‍ರವರು ಆಗಮಿಸಿದ ಎಲ್ಲಾ ಗಣ್ಯರನ್ನು ಹಾಗೂ ಕ್ರೀಡಾಪಟುಗಳನ್ನು ಸ್ವಾಗತಿಸಿದರು. ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 28 ತಂಡಗಳು ಭಾಗವಹಿಸಿದ್ದವು.
ಉಪನ್ಯಾಸಕರಾದ ಶ್ರೀ ಅವಿಲ್ ಮೋರಾಸ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಹೇಶ್ ಧನ್ಯವಾದ ಸಮರ್ಪಿಸಿದರು. ಭಾಗವಹಿಸಿದ ಎಲ್ಲಾ ತಂಡಗಳು ಕ್ರೀಡಾ ಮನೋಭಾವದಿಂದ ಉತ್ತಮ ರೀತಿಯ ಪ್ರದರ್ಶನ ನೀಡಿದರು. ಸಂತ ಪಾವ್ಲರ ಹಿರಿಯ ಪ್ರಾಥಮಿಕ ಶಾಲೆ ನೂರು ವರುಷಗಳನ್ನು ಪೂರೈಸುವ ಶತಮಾನೋತ್ಸವದ ಪಂದ್ಯಾಟದಲ್ಲಿ ಅತಿಥೇಯ ಶಾಲೆ ಪಂದ್ಯಾಟವನ್ನು ಏರ್ಪಡಿಸುವಲ್ಲಿ ದಕ್ಷಿಣ ಕನ್ನಡ ಸಾಕ್ಷರತಾ ಇಲಾಖೆಯೊಂದಿಗೆ ಕೈ ಜೋಡಿಸಿತ್ತು.
ಪಂದ್ಯಾಟದಲ್ಲಿ ಪ್ರಾಥಮಿಕ ಹಂತದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ತಾಲೂಕು, ದ್ವಿತೀಯ ಮಹಾಲಿಂಗೇಶ್ವರ ಪ್ರಾಥಮಿಕ ಶಾಲೆ, ಸುರತ್ಕಲ್, ಮಂಗಳೂರು ಉತ್ತರ, ಬಾಲಕರ ವಿಭಾಗದಲ್ಲಿ ಪ್ರಥಮ ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ, ಪುತ್ತೂರು ತಾಲೂಕು ಹಾಗೂ ದ್ವಿತೀಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ, ಬೆಳ್ತಂಗಡಿ ತಾಲೂಕು, ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಪ್ರಥಮ ಇಂದ್ರಪ್ರಸ್ಥ ವಿದ್ಯಾಲಯ, ಪುತ್ತೂರು, ಪುತ್ತೂರು ತಾಲೂಕು, ದ್ವಿತೀಯ ಅಲ್ ಬದ್ರಿಯಾ ಆಂಗ್ಲಮಾಧ್ಯಮ ಪ್ರೌಢಶಾಲೆ, ಕೃಷ್ಣಾಪುರ, ಸುರತ್ಕಲ್ ಮಂಗಳೂರು ಉತ್ತರ. ಬಾಲಕಿಯರ ವಿಭಾಗದಲ್ಲಿ ಪ್ರಥಮ ಬೆಥನಿ ಆಂಗ್ಲಮಾಧ್ಯಮ ಶಾಲೆ, ಪುತ್ತೂರು, ಪುತ್ತೂರು ತಾಲೂಕು, ದ್ವಿತೀಯ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ, ಲಾೈಲ, ಬೆಳ್ತಂಗಡಿ ತಾಲೂಕು.