March 26, 2021 : ಸಂತ ಅಂತೋನಿ ಕಾಲೇಜು, ನಾರಾವಿಯಲ್ಲಿ ಇತ್ತೀಚೆಗೆ ‘ಕಲಾರಂಗ್’ ಎಂಬ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ವಂದನೀಯ ಫಾ| ಸೈಮನ್ ಡಿ’ಸೋಜರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಹಾಗೂ ತುಳು ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ಶ್ರೀ ಸಾಯಿ ಕೃಷ್ಣ, ಕುಡ್ಲ ಇವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆಗಳನ್ನು ಅತ್ಯವಶ್ಯಕವಾಗಿ ಪೋಷಿಸಿ ಅಭಿವೃದ್ಧಿಗೊಳಿಸಲು ಕರೆ ನೀಡಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ ವಿಜೇತೆ ಕು. ಸಬಿತಾ ಮೋನಿಸ್ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾದರು.
ವೇದಿಕೆಯಲ್ಲಿ ಗೌರವ ಅತಿಥಿಗಳಾದ ತುಳು ನಟ ಶ್ರೀ ರಿಚ್ಚಾರ್ಡ್ ಪಿಂಟೊ, ನಾರಾವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಉದಯ ಹೆಗ್ಡೆ, ಚರ್ಚ್ ಪಾಲನಾ ಪರಿಷತ್‍ನ ಉಪಾಧ್ಯಕ್ಷರಾದ ಶ್ರೀ ವಿನ್ಸೆಂಟ್ ರೊಡ್ರಿಗಸ್, ಬ್ರದರ್ ಅವಿತ್ ಮೋನಿಸ್, ಉಪಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ, ಸಂಯೋಜಕರಾದ ಶ್ರೀ ದಿನೇಶ್ ಬಿ.ಕೆ. ಹಾಗೂ ಶ್ರೀಮತಿ ಸೌಮ್ಯ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ವಂದನೀಯ ಫಾ| ಅರುಣ್ ವಿಲ್ಸನ್ ಲೋಬೊರವರು ಸ್ವಾಗತಿಸಿ, ಉಪನ್ಯಾಸಕಿ ಶ್ರೀಮತಿ ದೀಕ್ಷಾ ವಂದಿಸಿದರು. ಉಪನ್ಯಾಸಕರಾದ ಶ್ರೀ ಅವಿನಾಶ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ನಡೆಸಲಾಯಿತು.