ಆಗಸ್ಟ್ 29, 2017: ಐಸಿವೈಎಮ್ ಬೆಳ್ತಂಗಡಿ ವಲಯ ಮಟ್ಟದ ವತಿಯಿಂದ ‘ಯುವಮಿಲನ – 2017’ ಕಾರ್ಯಕ್ರಮವು ಇತ್ತೀಚೆಗೆ ಬೆಳ್ತಂಗಡಿ ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಸ್ವಾಮಿ ಬೊನವೆಂಚರ್ ನಜ್ರೆತ್ ವಹಿಸಿದ್ದರು.
ಶ್ರೀ ಜ್ಯೋ ಪಿರೇರಾ, ಮಾಜಿ ಐಸಿವೈಎಮ್ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆಯಲ್ಲಿ ಶ್ರೀ ಹೆನ್ರಿ ಲೋಬೊ, ಬೆಳ್ತಂಗಡಿ ಚರ್ಚ್ ಉಪಾಧ್ಯಕ್ಷರು, ಶ್ರೀ ಜೋವೆಲ್ ಫೆರ್ನಾಂಡಿಸ್, ಲೆಕ್ಕ ಪರಿಶೋಧಕರು, ಶ್ರೀ ಮನಿಷ್ ಸಿಕ್ವೇರಾ, ಬೆಳ್ತಂಗಡಿ ವಲಯದ ಐಸಿವೈಎಮ್ ಅಧ್ಯಕ್ಷರು, ಶ್ರೀ ವಿವಿಯನ್ ಫೆನಾಂಡಿಸ್, ಕಾರ್ಯದರ್ಶಿ, ಐಸಿವೈಎಮ್ ಬೆಳ್ತಂಗಡಿ ವಲಯ, ಶ್ರೀ ವಿಲ್ಟನ್ ಪಿಂಟೊ, ಅಧ್ಯಕ್ಷರು ಬೆಳ್ತಂಗಡಿ ಐಸಿವೈಎಮ್ ಘಟಕ ಉಪಸ್ಥಿತರಿದ್ದರು. ಬೆಳ್ತಂಗಡಿ ವಲಯದ ಐಸಿವೈಎಮ್ ನಿರ್ದೇಶಕರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊರವರು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.