ICYM ಬೆಳ್ತಂಗಡಿ ವಲಯದ ಯುವ ಜನರಿಂದ ‘ಸತ್ಕಾರ್ 2K18’ ಎಂಬ ಕಾರ್ಯಕ್ರಮವು ಬದ್ಯಾರ್ ಚರ್ಚ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ICYM ನಿರ್ದೇಶಕರಾದ ವಂದನೀಯ ಸ್ವಾಮಿ ರೊನಾಲ್ಡ್ ಡಿ’ಸೋಜರವರು ನೆರವೇರಿಸಿ, ಯುವಜನರು ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಒಳಿತಿನ ಶಕ್ತಿಯಾಗಿ ಮೂಡಿ ಬರಲು ಕರೆ ನೀಡಿದರು.
ವೇದಿಕೆಯಲ್ಲಿ ICYM ಬೆಳ್ತಂಗಡಿ ವಲಯದ ನಿರ್ದೇಶಕರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ಬದ್ಯಾರ್ ಚರ್ಚ್‍ನ ಧರ್ಮಗುರುಗಳಾದ ವಂದನೀಯ ಸ್ವಾಮಿ ಮೆಲ್ವಿನ್ ಡಿ’ಸೋಜ, ICYM ಕೇಂದ್ರೀಯ ಕಾರ್ಯದರ್ಶಿ ಶ್ರೀ ಜೋಯ್ ಕೊನ್ಸೆಸೊ, ಬದ್ಯಾರ್ ಚರ್ಚ್ ಉಪಾಧ್ಯಕ್ಷರಾದ ಶ್ರೀ ರಫಾಯಲ್ ವೇಗಸ್, ICYM ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಮನೀಷ್ ಸಿಕ್ವೇರಾ, ಕಾರ್ಯದರ್ಶಿ ವಿವಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ಯುವಕರನ್ನು ಸನ್ಮಾನಿಸಲಾಯಿತು, ಜೊತೆಗೆ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಮಡಂತ್ಯಾರ್ ಘಟಕಕ್ಕೆ ನೀಡಲಾಯಿತು. ಜೋವೆಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.