June 7, 2017: ಸಂತ ಅಂತೋನಿ ಚರ್ಚ್ ನಾರಾವಿಯಲ್ಲಿ 7 ವರ್ಷಗಳ ಅಪೂರ್ವ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹಾರವರ ಸ್ಥಾನದಲ್ಲಿ ನೂತನ ಧರ್ಮಗುರುಗಳಾಗಿ ಇಂದುಬೆಟ್ಟು ಚರ್ಚ್‍ನಿಂದ ಆಗಮಿಸಿದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜರವರಿಗೆ ಚರ್ಚ್ ಭಕ್ತಾಧಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ಮುಖ್ಯೋಪಾಧ್ಯಾಯರಾದ ವಂದನೀಯ ಸ್ವಾಮಿ ಲ್ಯಾನ್ಸಿ ಸಲ್ಡಾನ್ಹ ಹಾಗೂ ಮತ್ತಿತರರು ಉಪಸ್ಥಿತರಿದ್ದರು.