13-08-2015, ಗುರುವಾರದಂದು ಸಂತ ಅಂತೋನಿ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ನಾರಾವಿ, ಗ್ರಾಮ ಪಂಚಾಯತು ನಾರಾವಿ, ಪ್ರಾಥಮಿಕ ಆರೋಗ್ಯ ಕೇಂದ್ರ ನಾರಾವಿ ಇವರ ಜಂಟಿ ಆಶ್ರಯದಲ್ಲಿ ಮಲೇರಿಯಾ ಮತ್ತು ಡೆಂಗ್ಯು ವಿರೋಧಿ ಮಾಸಾಚರಣೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹೊ ರವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ| ಅರುಣ್ ಕುಮಾರ್- ಜಿಲ್ಲಾ ಮಲೇರಿಯಾ ಅಧಿಕಾರಿಗಳು, ಡಾ| ಜಯರಾಂ ಪೂಜಾರಿ- ಜಿಲ್ಲಾ ಮಲೇರಿಯಾ ಪರಿವೀಕ್ಷಣಾಧಿಕಾರಿಗಳು, ಮಲೇರಿಯಾ ಮತ್ತು ಡೆಂಗ್ಯು ಜ್ವರಗಳ ಬಗ್ಗೆ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ನಾರಾವಿ ಇದರ ಅಧ್ಯಕ್ಷರಾದ ಶ್ರೀ ರಾಮಚಂದ್ರ ಭಟ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ| ಅಭಿಲಾಷ್ ವೈಧ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ನಾರಾವಿ, ಶ್ರೀಮತಿ ಜಯಲಕ್ಷ್ಮಿ ತಾಲೂಕು ಆರೋಗ್ಯ ಸಂದರ್ಶಿಕೆ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಶ್ರೀ ವಿಲಿಯಂ ಕೊರ್ಡೇರೊ, ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ ಸ್ವಾಗತಿಸಿ ಶ್ರೀ ರಾಜೇಶ್ ಜೈನ್ ವಂದಿಸಿದರು. ಉಪನ್ಯಾಸಕಿ ಕುಮಾರಿ ಶಲ್ಮ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.