ಇತ್ತೀಚೆಗೆ ಸಂತ ಅಂತೋನಿ ಕಾಲೇಜು, ನಾರಾವಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ “ಮಹಿಳೆಯ ಜೀವನಶೈಲಿ, ಆರೋಗ್ಯ ಹಾಗೂ ಸ್ವಚ್ಛತೆ” ಎಂಬ ವಿಷಯದ ಮೇಲೆ ಡಾ. ವಾಣಿ ರಾವ್, ಬೆಳ್ತಂಗಡಿ ಇವರು ಅರ್ಧ ದಿನದ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹೊರವರು ವಹಿಸಿದ್ದರು. ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊರವರು ಸ್ವಾಗತಿಸಿದರು. ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ, ವಿದ್ಯಾರ್ಥಿ ಪೋಷಕರಾದ ಶ್ರೀಮತಿ ಮೇಬಲ್ ಫೆರ್ನಾಂಡಿಸ್, ಮಹಿಳಾ ಸಂಘದ ಮೇಲ್ವಿಚಾರಕಿ ಶ್ರೀಮತಿ ಛಾಯಾ ಹೆಚ್., ಪದವಿ ಕಾಲೇಜಿನ ಕಾರ್ಯದರ್ಶಿಗಳಾದ ವಿದ್ಯಾಶ್ರೀ ಜೈನ್ ಹಾಗೂ ಪದವಿ ಪೂರ್ವ ಕಾಲೇಜಿನ ಆಶಾಪ್ರಭಾ ಉಪಸ್ಥಿತರಿದ್ದರು.