ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಸಾಂಸ್ಕøತಿಕ ಹಬ್ಬವನ್ನು ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹಾರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ವಕೀಲರಾದ ಶ್ರೀ ಎಲೋಶಿಯಸ್ ಲೋಬೊರವರು ವಹಿಸಿ ವಿದ್ಯಾರ್ಥಿ ಜೀವನದಲ್ಲಿ ದೊರೆತ ಅವಕಾಶಗಳನ್ನು ಬಳಸಿ ಜೀವನ ರೂಪಿಸುವುದು ಅಗತ್ಯ ಎಂದು ಕರೆ ನೀಡಿದರು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಮೇಬಲ್ ಫೆರ್ನಾಂಡಿಸ್, ಉಪನ್ಯಾಸಕರಾದ ಶ್ರೀ ರಿಚ್ಚಾರ್ಡ್ ಮೋರಾಸ್, ವಿದ್ಯಾರ್ಥಿ ನಾಯಕ ನಿಹಾಲ್ ಮಾರ್ಟಿನ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ ಸ್ವಾಗತಿಸಿ, ಶ್ರೀ ರಿಚ್ಚಾರ್ಡ್ ಮೋರಾಸ್ ವಂದಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.