June 20, 2017: ಭಾರತೀಯ ಕಥೋಲಿಕ ಯುವ ಸಂಚಲನ, ಬೆಳ್ತಂಗಡಿ ವಲಯದ ಯುವಜನರಿಗಾಗಿ ವಲಯ ಮಟ್ಟದ ‘ಪುರಸ್ಕಾರ್ 2017’ ಕಾರ್ಯಕ್ರಮವನ್ನು ನಾರಾವಿಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಂತೋನಿ ಚರ್ಚ್‍ನ ಧರ್ಮಗುರುಗಳಾದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜ, ಮುಖ್ಯ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಮ್ ನಿರ್ದೇಶಕರಾದ ವಂದನೀಯ ಸ್ವಾಮಿ ರೊನಾಲ್ಡ್ ಡಿ’ಸೋಜ, ಐಸಿವೈಎಮ್ ಬೆಳ್ತಂಗಡಿ ವಲಯದ ನಿರ್ದೇಶಕರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ವಲಯ ಅಧ್ಯಕ್ಷ ಜೋವೆಲ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವಕರಿಗೆ ಹಾಗೂ ಘಟಕಕ್ಕೆ ಸನ್ಮಾನಿಸಲಾಯಿತು.