ಅಕ್ಟೋಬರ್ 14, 2017: ಸಂತ ಅಂತೋನಿ ಚರ್ಚ್, ನಾರಾವಿಯಲ್ಲಿ ಐಸಿವೈಎಮ್ ಸದಸ್ಯರಿಂದ ಚರ್ಚ್‍ನ ಕ್ರೈಸ್ತ ಬಾಂಧವರಿಗೆ ‘ವಾಡ್ಯಾ ಸಾಂಗಾತ್ 2K17’ ಎಂಬ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಚರ್ಚ್ ಧರ್ಮಗುರುಗಳಾದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜರವರು ಸ್ಪರ್ಧೆಯನ್ನು ಉದ್ಘಾಟಿಸಿದರು. ಐಸಿವೈಎಮ್ ನಿರ್ದೇಶಕರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ ಇವರ ಮಾರ್ಗದರ್ಶನ ಹಾಗೂ ಐಸಿವೈಎಮ್ ಅಧ್ಯಕ್ಷ ಜೊೈಸನ್ ರೊಡ್ರಿಗಸ್ ಇವರ ಮುಂದಾಳತ್ವದಲ್ಲಿ ಈ ಸ್ಪರ್ಧೆಗಳು ನಡೆದವು.